Friday, September 25, 2009

ಹೇಗೊಂದು balance sheet....

ಬೆಳಿಗ್ಗೆ ಎದ್ದಾಗಿನಿಂದಲೇ ಏನೋ ಉದಾಸ ಮನಸ್ಸಿಗೆ. ಮೊಮ್ಮೊಮ್ಮೆ ಕಾರಣ ಇಲ್ಲದೇನೆ ದಿನದ ಪ್ರಾರಂಭ ಉದಾಸೀನತೆ, ಬೇಸರದಿಂದ ಕೂಡಿರುತ್ತದೆ. ಆದರೆ ನನ್ನ ಈವತ್ತಿನ ಉದಾಸೀನತೆಗೆ ಕಾರಣ ಇದೆ. ಇದು ಈವತ್ತು ಬೆಳಗ್ಗೆಯಿಂದ ಪ್ರಾರಂಭವಾದ ಬೇಸರ ಅಲ್ಲ. ನಿನ್ನೆ ರಾತ್ರಿ ಅಮ್ಮನ ಜೊತೆ ಮಾತನಾಡಿದ ನಂತರದಿಂದ ಆರಂಭವಾದ ಬೇಸರ. ಅಮ್ಮನ ಜೊತೆ ಮಾತನಾಡಿದರೆ ಬೇಸರ ಯಾಕೆ ಅಂತ ಕೇಳ್ತೀರ. ಅದಕ್ಕೂ ಕಾರಣ ಇದೆ. ಅಮ್ಮನದು ಒಂದೇ ಒತ್ತಾಯ ಊರಿಗೆ ಬಾ ಮಗನೆ ಅಂತ. ಹೋಗೋಕೆ ನನಗೆ time ಇಲ್ಲ. ಅಮ್ಮ ಬೇಸರದಿಂದ ಇನ್ನೊಮ್ಮೆ ಕೇಳಲ್ಲ ಹೋಗು. ನಿನ್ಗೆ ಯಾವಾಗ ಬರಬೇಕು ಅನ್ಸತ್ತೊ ಆಗ್ಲೆ ಬಾ. ಅಂತ ನೊಂದುಕೊಳ್ತಾರೆ. ನನ್ಗೂ ನೋವಾಗತ್ತೆ. but ಎನ್ ಮಾಡಲಿ ಕೆಲಸ ಬಿಟ್ಟು ಹೋಗೋಕೂ ಆಗಲ್ಲ. ಏನು ಅಷ್ಟೋಂದು ಕೆಲಸ ಅಂತ ಕೇಳ್ತೀರ, balance sheet tally ಮಾಡೋದು ಕಣ್ರೀ.

ಹೀಗೆ orkut ಲಿ scrap check ಮಾಡ್ತ ಇದ್ದೆ. ಅರೇ ನನ್ನ college friend ಒಬ್ಳು scrap ಹಾಕಿದ್ಲು. hi hw ru? ಕೊನೆಗೂ ನನ್ನ ಮದ್ವೆಗೆ ಬಂದಿಲ್ಲ ಅಲ್ವಾ? ಅಷ್ಟೆಲ್ಲಾ ಹೇಳಿದ್ನಲೋ, ಬಂದೆ ಬರ್ತೀನಿ ಅಂದಿದ್ದೆ. ಅಂತ. ಕೊಪಕ್ಕಿಂತ ಜಾಸ್ತಿ ಬೇಸರದಿಂದ ಹೇಳಿದಾಳೆ ಅನ್ನಿಸ್ತು. ತುಂಬಾ ಒಳ್ಳೆ friend. ಮದ್ವೆಗೆ ಬರ್ಲೇ ಬೇಕು ಅಂತ ಒತ್ತಾಯಿಸಿದ್ದಳು. ಅವಳ ಹುಡುಗನನ್ನು ಪರಿಚಯ ಮಾಡಿಸಿದ್ದಳು. ನಾನೂ ಹೋಗ್ಲೇ ಬೇಕು ಅಂದುಕೊಂಡಿದ್ದೆ. but ಏನ್ಮಾಡೋದು balance sheet tally ಮಾಡ್ಬೇಕಿತ್ತು.

ಆಗ್ಲೇ 3 ಗಂಟೆ. ಊಟ ಮಾಡಕ್ಕೂ time ಸಿಕ್ಕಿರ್ಲಿಲ್ಲ. ಇವಾಗ ಸ್ವಲ್ಪ free. ಮಧ್ಯಾನ್ಹ ಅಷ್ಟೊಂದು ಕೆಲಸ ಇಲ್ಲ. ಒಬ್ಬ friend ಆಗ್ಲೆ cl ಮಾಡಿದ್ದ. movie ಗೆ ಹೊಗ್ತಾ ಇದಿವಿ ಕಣೋ. ಬರ್ತೀಯಾ? ಬರೋದಿದ್ರೆ 4 ಗಂಟೆ ಒಳ್ಗಡೆ ನಮ್ಮ ಮನೆ ಹತ್ರಾ ಬಂದುಬಿಡೋ ಅಂತ. ಎಷ್ಟೋ ವರ್ಷ ಆಗೋಯ್ತು. friend ಜೊತೆ movie, party ಅಂತ ಸುತ್ತಿ. ಸರಿ friend cl ಮಾಡಿ ನಾನು ಬರ್ತ ಇದೀನಪ್ಪ ಅಂತ ಹೇಳಿದೆ. ಅವನ್ಗೂ ತುಂಬಾ ಖುಷಿ. ಇನ್ನೆನೂ friend ಮನೆ ಹತ್ತಿರ ಬಂದಿದ್ದೆ. boss cl. ಯಾವ್ದೋ ಕೆಲಸ ಇದೆ. ಇನ್ನೆಲ್ಗೋ ಹೋಗ್ಬೇಕು ಬಾ ಅಂತ. ಅದಕ್ಕೆ friend ಹೇಳಿದ್ದ. ನಿನ್ನ ನಂಬಿಕೊಂಡು ಎನಾದ್ರು plan ಮಾಡೋದು ಕಷ್ಟ ಕಣೋ ಅಂತ. ಏನ್ ಮಾಡೋದು balance sheet tally ಮಾಡ್ಬೇಕಿತ್ತು.

ಊರು, ಮನೆ, ಅಮ್ಮ, ಅಪ್ಪ, friends ಎಲ್ಲರಿಂದ ದೂರ. ಈವಾಗ ನಾನೊಂತರ ಒಬ್ಬಂಟಿ. ಹೀಗೊಂದು ಕೂಡಿಸಿ ಕಳೆಯುವಾಟದಲ್ಲಿ. ನನ್ನ life ಲಿ ನನಗೆ ಸಿಕ್ಕಿದ್ದೇನು? net profit or net loss? ಯೋಚಿಸಬೇಕಾಗಿದೆ. ಈ ಜೀವನ ಎಂಬ balance sheet ನಾ tally ಮಾಡೋದಾದ್ರೂ ಹೇಗೇ?